ದ್ರವರಾಜ		
ರಾಜಲೋಹಗಳು ಎನ್ನಿಸಿಕೊಂಡಿರುವ ಚಿನ್ನ ಮತ್ತು ಪ್ಲಾಟಿನಮ್ಮನ್ನು ವಿಲೀನಗೊಳಿಸಬಲ್ಲ ಆಮ್ಲಮಿಶ್ರಣ (ಅಕ್ವರೀಜಿಯ). ಸಾರಯುತ ನೈಟ್ರಿಕ್ ಆಮ್ಲ ಮತ್ತು ಅಥವಾ ಹೈಡ್ರೋಕ್ಲೋರಿಕ್ ಆಮ್ಲ ಒಂದೊಂದೇ ಈ ಕ್ರಿಯೆಯನ್ನು ನಿರ್ವಹಿಸದು. ಆದರೆ 1 : 3 ನಿಷ್ಪತ್ತಿಂiÀiಲ್ಲಿ ಇವನ್ನು ಬೆರೆಸಿದ್ದಾದರೆ ಆ ಮಿಶ್ರಣದಲ್ಲಿ ರಾಜಲೋಹಗಳು ವಿಲೀನವಾಗಿಹೋಗುತ್ತವೆ. ಆದ್ದರಿಂದಲೇ ರಸವಾದಿಗಳು ಈ ಮಿಶ್ರಣಕ್ಕೆ ದ್ರವರಾಜ ಅಥವಾ ರಾಜಾಮ್ಲ ಎಂದು ಹೆಸರಿಸಿದರು. ಮಿಶ್ರಣದಲ್ಲಿ ಬಿಡುಗಡೆಯಾದ ಉದ್ಭವಾವಸ್ಥೆಯ ಕ್ಲೋರಿನ್ ವಿಲೀನಕ್ರಿಯೆಯನ್ನು ಸಾಧಿಸುತ್ತದೆ. ಹೈಡ್ರೋಕ್ಲೋರಿನ್ ಆಮ್ಲವನ್ನು ನೈಟ್ರಿಕ್ ಆಮ್ಲ ಉತ್ಕರ್ಷಿಸಿ ಕ್ಲೋರಿನ್ನನ್ನು ಬಿಡುಗಡೆ ಮಾಡುತ್ತದೆ: 

ಬಳಿಕ ಚಿನ್ನ ಈ ನವಜಾತ ಕ್ಲೋರಿನ್ನಿನೊಡನೆ ವರ್ತಿಸಿ ವಿಲೀನವಾಗಬಲ್ಲ ಕ್ಲೋರ್‍ಅರೇಟ್ ಎಂಬ ಸಂಕೀರ್ಣ ವಿದ್ಯುದ್ವಾಹಿ ಕಣವನ್ನು ಕೊಡುತ್ತದೆ. 

ಇದು ಕಿತ್ತಳೆ - ಹಳದಿ ಬಣ್ಣದ ದ್ರವ ಮತ್ತು ಉತ್ಕರ್ಷಣಕಾರಿ. ಪ್ಲಾಟಿನಮ್ ಗುಂಪಿಗೆ ಇತರ ಲೋಹಗಳು ಸಾಮಾನ್ಯವಾಗಿ ಇದರಲ್ಲಿ ವಿಲೀನಗೊಳ್ಳಲಾರವು. ಆದರೆ ಮೊಹರುಮಾಡಿದ ಪಾತ್ರೆಯಲ್ಲಿ ಒತ್ತಡಕ್ಕೆ ಒಳಪಡಿಸಿದಾಗ ಲೋಹಗಳು ದ್ರವರಾಜದಲ್ಲಿ ವಿಲೀನಹೊಂದುವುವು.									(ಬಿ.ಎಸ್.ಯು)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ